ಕ್ರಿಸ್ ಗೇಲ್ ಬೆಂಗಳೂರು ತಂಡಕ್ಕೆ ಆಡೋ ಸಾಧ್ಯತೆ ಇನ್ನೂ ಇದೆ | Oneindia Kannada

2018-01-05 542

ಟೀಂ ಇಂಡಿಯಾದ ಮಾಜಿ ನಾಯಕ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ಅವರು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ ಬೀಸುವುದು ಖಚಿತವಾಗಿದೆ. ಯಾವ ಆಟಗಾರರನ್ನು ಯಾವ ತಂಡ ಉಳಿಸಿಕೊಳ್ಳಲಿದೆ ಎಂಬ ಕುತೂಹಲಕ್ಕೆ ಗುರುವಾರ ಸಂಜೆ ತೆರೆಬಿದ್ದಿದೆ. ಸ್ಟಾರ್ ಆಟಗಾರರಾದ ಎಂಎಸ್ ಧೋನಿ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಅವರು ಮತ್ತೊಮ್ಮೆ ತಮ್ಮ ತಮ್ಮ ತಂಡಗಳಲ್ಲೇ ಉಳಿಸಿಕೊಂಡಿದ್ದಾರೆ. ಆದರೆ, ಗೌತಮ್ ಗಂಭೀರ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಕೈಬಿಡಲಾಗಿದೆ. ಅವರು ಮತ್ತೊಮ್ಮೆ ಹರಾಜಿನಲ್ಲಿ ಭಾಗವಹಿಸಿ ಆಯ್ಕೆಯಾಗಬಹುದಾಗಿದೆ. ಆದರೆ ಬೆಂಗಳೂರು ತಂಡದ ಬೆಳವಣಿಗೆ ಎಲ್ಲರ ಗಮನ ಸೆಳೆದಿದೆ . ಕಿರಿಯ ಆಟಗಾರ ಸರ್ಫ್ರಾಜ್ ಖಾನ್ ರನ್ನು ಉಳಿಸಿಕೊಂಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ . ಆದರೆ ಗೇಲ್ ಇನ್ಮುಂದೆ ಬೆಂಗಳೂರು ತಂಡಕ್ಕೆ ಆಡುವುದಿಲ್ಲ ಎನ್ನಲು ಹೇಳಲಾಗುವುದಿಲ್ಲ . ಯಾಕೆ ಅಂತ ಈ ವಿಡಿಯೋ ನೋಡಿ .
Gayle has not been retained by RCB but that doesn't mean he can no longer play for RCB. Their is a way from which he can still play for our team

Videos similaires